ಚಿಕ್ಕಬಳ್ಳಾಪುರ: ತಿಳಿ ಹೇಳಬೇಕಾದ ಶಿಕ್ಷಕಿಯೇ ವಿದ್ಯಾರ್ಥಿಗೆ ದೃಷ್ಟಿ ಕಳೆದುಕೊಳ್ಳುವಂತೆ ಮಾಡಿದ ಘಟನೆ ಚಿಂತಾಮಣಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕಳೆದ ವರ್ಷ ಶಿಕ್ಷಕಿಯೊಬ್ಬರು ಕೋಪದ ಕೈಗೆ ಬುದ್ಧಿ ಕೊಟ್ಟು ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ಕೋಲು ಎಸೆದಿದ್ದರು. ಅದರಿಂದಾದ ಗಾಯದ ಪರಿಣಾಮ ವಿದ್ಯಾರ್ಥಿಯ ಬಲಗಣ್ಣಿನ ದೃಷ್ಟಿ ಶಾಶ್ವತವಾಗಿ ಹೊರಟು ಹೋಗಿದೆ.
ನತದೃಷ್ಟ ವಿದ್ಯಾರ್ಥಿ ಯಶ್ವಂತ್ ಈ ಘಟನೆಯಿಂದ ಸಂಪೂರ್ಣವಾಗಿ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಅವರ ಮೇಲೆ ಕೇಸು ದಾಖಲಾಗಿದೆ.
ಘಟನೆ ನಡೆದ ಆರಂಭದಲ್ಲಿ ಗಾಯದ ಪರಿಣಾಮವನ್ನು ಊಹಿಸದ ಹೆತ್ತವರು ಕ್ರಮೇಣ ಆತನ ಕಣ್ಣಿನ ಸ್ಥಿತಿ ಹದೆಗೆಟ್ಟಾಗ ನೇತ್ರಾಲಯಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರ ಸೂಚನೆಯಂತೆ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಆದರೂ ಬಾಲಕನ ಕಣ್ಣಿನ ದೃಷ್ಟಿ ಸರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ಶಿಕ್ಷಕಿ, ತಾಲೂಕು ಬ್ಲಾಕ್ ಶಿಕ್ಷಣಾಧಿಕಾರಿ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.