ದಾವಣಗೆರೆ: ಹತ್ಯೆ ನಡೆದ ಒಂದೇ ದಿನದಲ್ಲಿ ದಾವಣಗೆರೆ ಪೊಲೀಸರು ಶ್ವಾನ ದಳದ ಸಹಾಯದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಹೊನ್ನೂರು ಗ್ರಾಮದ ಜಯಪ್ಪ (29) ಎಂದು ಗುರುತಿಸಲಾಗಿದೆ.
ಮೃತನನ್ನು ಚಿತ್ರದುರ್ಗದ ಹೆಗಡೆಹಾಳ್ ಗ್ರಾಮದ ಶಿವಕುಮಾರ್ ಎಂದು ಗುರುತಿಸಲಾಗಿದೆ.
ಜಯಪ್ಪನ ಪತ್ನಿ ಮತ್ತು ಶಿವಕುಮಾರ್ ನಡುವೆ ಅನೈತಿಕ ಸಂಬಂಧ ಇತ್ತು. ಶಿವಕುಮಾರ್ ಎ.4 ರಂದು ಜಯಪ್ಪನ ಪತ್ನಿಯನ್ನು ಭೇಟಿಯಾಗಲು ಹೊನ್ನೂರಿಗೆ ಬಂದಿದ್ದ. ಈ ಸಂದರ್ಭದಲ್ಲಿ ಆರೋಪಿ ಜಯಪ್ಪ ಮತ್ತು ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ. ಜಯಪ್ಪ ಶಿವಕುಮಾರ್‌ನಿಗೆ ಥಳಿಸಿದ್ದನು. ಆ ಸಂದರ್ಭದಲ್ಲಿ ಅಲ್ಲಿಂದ ಓಡಿ ಹೋದ ಶಿವಕುಮಾರ್‌ನನ್ನು ಬೆನ್ನತ್ತಿ ಹೋದ ಜಯಪ್ಪ, ಹೊಲವೊಂದರಲ್ಲಿ ಅವನನ್ನು ಕೊಲೆ ಮಾಡಿ, ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿದ ದಾವಣಗೆರೆ ಪೊಲೀಸರು ಆರೋಪಿಯನ್ನು ಹಿಡಿದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.