ಬೆಂಗಳೂರು: ಸಾಲು ಸಾಲು ರಜೆಗಳು ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ, ಪ್ರವಾಸಕ್ಕೆ ತೆರಳುವವರು ತಮ್ಮ ಮನೆಗಳ ಮೇಲೆ ನಿಗಾ ವಹಿಸಬೇಕು. ಭದ್ರತೆಯ ಬಗ್ಗೆ ಕಾಳಜಿ ಇರಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಚ್ಚರಿಸಿದ್ದಾರೆ.
ನಗರಗಳಲ್ಲಿ ಕಳ್ಳತನ, ದರೋಡೆ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಹೆಚ್ಚು ದಿನ ಪ್ರವಾಸಕ್ಕೆ ತೆರಳುವವರು ತಮ್ಮ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡಿ. ಗುಣಮಟ್ಟದ ಬೀಗ ಬಳಸಿ. ಬೀಗದ ಕೀಯನ್ನು ಮನೆಯ ಆಸುಪಾಸಿನಲ್ಲಿಡುವ ಅಭ್ಯಾಸ ಬಿಟ್ಟುಬಿಡಿ. ಮನೆ ಕೆಲಸದವರನ್ನು ನೇಮಕ ಮಾಡುವಾಗ ಎಚ್ಚರ ವಹಿಸುವಂತೆಯೂ ಸೂಚಿಸಿದ್ದಾರೆ.