ವಿಜಯನಗರ: ಹಳೇ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತನನ್ನು ಹೊಸಪೇಟೆ ಮೂಲದ ಹಾಲಿ ನಿವಾಸಿ ದಾವಣಗೆರೆಯ ಹೊನ್ನೂರಸ್ವಾಮಿ ಎಂದು ಗುರುತಿಸಲಾಗಿದೆ.
ಆರೋಪಿ ಕಾಳಿ ಯಾನೆ ಕಾಳಿದಾಸ್ ಹೊನ್ನೂರಸ್ವಾಮಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಹೊನ್ನೂರಸ್ವಾಮಿ ಹೊಸಪೇಟೆಯ ಜಂಬುನಾಥ ಜಾತ್ರೆಯ ನಿಮಿತ್ತ ಆಗಮಿಸಿದ ವಿಷಯ ತಿಳಿದು ಕಾಳಿ ಆತನನ್ನು ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.
ಪೊಲೀಸರು ಆರೋಪಿ ಕಾಳಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.