ಬೆಂಗಳೂರು: ಸರ್ಕಾರದ ನಕಲಿ ಇ ಮೇಲ್ ಐಡಿಗಳನ್ನು ರಚಿಸುವ ಮೂಲಕ 18 ಬಾರಿ ನ್ಯಾಯಾಲಯದ ನಕಲಿ ಅದೇಶ ಸೃಷ್ಟಿ ಮಾಡಿ ICICI ಬ್ಯಾಂಕಿನಿಂದ 1.32 ಕೋಟಿ ರೂ. ವಂಚಿಸಿದ ಮೂವರು ಉತ್ತರ ಭಾರತ ಮೂಲದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ದೆಹಲಿಯ ಅಭಿಮನ್ಯು ಕುಮಾರ್ ಪಾಂಡೆ, ನೀರಜ್ ಸಿಂಗ್ ಮತ್ತು ಸಾಗರ್ ಲಾಕುರ್ ಎಂದು ಗುರುತಿಸಲಾಗಿದೆ.
ಬ್ಯಾಂಕಿನ ಹಲಸೂರು ಶಾಖೆಯ ಮ್ಯಾನೇಜರ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂಧಿತರ ಖಾತೆಯಲ್ಲಿದ್ದ 63 ಲಕ್ಷ ರೂ. ಗಳನ್ನು ಜಪ್ತಿ ಮಾಡಲಾಗಿದೆ.