ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಧ್ರುವ ಮಿತ್ತಲ್, ರೋಹಿತ್ ರಂಜನ್ ಮತ್ತು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡದ ನಡುವಿನ ಪಂದ್ಯಾಟದ ಸಂದರ್ಭದಲ್ಲಿ ಈ ಆರೋಪಿಗಳು ಬೆಟ್ಟಿಂಗ್ಸ್ ದಂಧೆ ನಡೆಸಿದ್ದರು. ಪಂದ್ಯ ನಡೆಯುವುದಕ್ಕೂ, ನೇರ ಪ್ರಸಾರಕ್ಕೂ ನಡುವೆ ಕೆಲವು ಸೆಕೆಂಡ್‌ಗಳ ಅಂತರ ಇದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಆರೇಪಿಗಳು ಬೆಟ್ಟಿಂಗ್ಸ್ ದಂಧೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಬಂಧಿತರಿಂದ 85 ಲಕ್ಷ ರೂ. ಮತ್ತು ಬೆಟ್ಟಿಂಗ್ ಟೋಕನ್ ಗಳನ್ನು ವಶಕ್ಕೆ ಪಡೆಯಲಾಗಿದೆ.