ಮಂಡ್ಯ: ಕಾಂಗ್ರೆಸ್‌ನ ಜಾತಿ ಗಣತಿಯ ಉದ್ದೇಶ ಹಿಂದೂಗಳನ್ನು ಜಾತಿಯ ಕಾರಣಕ್ಕಾಗಿ ಒಡೆಯುವುದಾಗಿದೆ ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ವೀರಶೈವ. ಲಿಂಗಾಯುತ, ಕುರುಬ, ಒಕ್ಕಲಿಗ, ಕುಂಬಾರ ಹೀಗೆ ಹಿಂದೂ ಧರ್ಮದ ಜನರನ್ನು ಜಾತಿಯ ಮೇಲೆ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಲು ಹೊರಟಿದೆ. ಮುಸಲ್ಮಾನರಲ್ಲೂ ಜಾತಿಗಳಿವೆ. ಅವರನ್ನು ಜಾತಿ ಗಣತಿ ಮಾಡಿ ಗುರುತಿಸುವ ಕೆಲಸಕ್ಕೆ ಯಾರೊಬ್ಬರೂ ಮುಂದಾಗಿಲ್ಲ. ಮುಸ್ಲಿಮರನ್ನು ಮುಸ್ಲಿಮರು ಎಂದೇ ಗುರುತಿಸುವ ಕಾಂಗ್ರೆಸ್ ಹಿಂದೂಗಳನ್ನು ಮಾತ್ರ ವಿಭಜಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಸ್ಲಿಮರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸಿ ಅವರಿಗೆ ಬಜೆಟಿನಲ್ಲಿ ಹೆಚ್ಚಿನ ಪಾಲನ್ನು ನೀಡುವ ನೀತಿಯನ್ನು ಅನುಸರಿಸಿತ್ತಿದೆ. ಇದಕ್ಕೆ ಮುಸ್ಲಿಮರ ತುಷ್ಟೀಕರಣ ಎನ್ನದೆ ಬೇರೇನು ಹೇಳುವುದು ಎಂದು ಪ್ರಶ್ನಿಸಿದ್ದಾರೆ.