ಮಂಗಳೂರು; ನಗರದ ಬಿಜೈ ಪ್ರದೇಶದ ಹಿರಿಯ ನಾಗರಿಕ ಮಹಿಳೆಯೊಬ್ಬರ ಮೇಲೆ ನಡೆದ ಡಿಜಿಟಲ್ ವಂಚನೆ ಯತ್ನ ಪ್ರಕರಣವನ್ನು ಮಂಗಳೂರು ನಗರದ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುಮಾರು ₹17 ಲಕ್ಷ ರಕ್ಷಿಸಿದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯೊಂದರಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
ಇಂದು ಬೆಳಗಿನ ಜಾವ ಉಡುಪಿಯ ಗೃಹಕಚೇರಿಯಲ್ಲಿ ದಿನಪತ್ರಿಕೆ ವೀಕ್ಷಿಸುವ ವೇಳೆ, ಮಂಗಳೂರಿನ ಬಿಜೈ ಪ್ರದೇಶದ ಹಿರಿಯ ನಾಗರಿಕ ಮಹಿಳೆಯೊಬ್ಬರ ಮೇಲೆ ನಡೆದ ಡಿಜಿಟಲ್ ವಂಚನೆ ಯತ್ನವನ್ನು ಮಂಗಳೂರು ಪೊಲೀಸ್ ಇಲಾಖೆಯು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ತಡೆದು, ಸುಮಾರು ₹17 ಲಕ್ಷ ರಕ್ಷಿಸಿದ ಘಟನೆಯ ಕುರಿತು ತಿಳಿಯಿತು.
ಈ ಹಿನ್ನೆಲೆಯಲ್ಲಿ ಡಿಸಿಪಿ ಅಧಿಕಾರಿಗಳಾದ ಮಿಥುನ್ ಮತ್ತು ರವಿಶಂಕರ್ ಅವರನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಆಹ್ವಾನಿಸಿ, ಅವರ ಸಮಯೋಚಿತ ಹಾಗೂ ಪರಿಣಾಮಕಾರಿಯಾದ ಕಾರ್ಯಪದ್ಧತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಲಾಯಿತು.

ಹಿರಿಯ ನಾಗರಿಕರ ಹಣವನ್ನು ವಂಚಕರಿಂದ ಕಾಪಾಡಿದ ಈ ಸಾಹಸಾತ್ಮಕ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.



















