ಮಂಗಳೂರು: “ಅಧಿಕಾರದಿಂದ ಇಳಿದು ಒಂದು ವರ್ಷವಾಗಿಲ್ಲ, ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ.”
ಇದು ರಘುಪತಿ ಭಟ್ ವಿರುದ್ಧ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಾಯಿಯಿಂದ ಉದುರಿದ ಅಣಿಮುತ್ತುಗಳು!
ಪದವೀಧರ ಕ್ಷೇತ್ರಗಳಿವೆ, ಅದಕ್ಕೊಂದು ಚುನಾವಣೆ ಬೇರೆ ಇದೆ ಎನ್ನುವ ಬಗ್ಗೆ ಬಹುತೇಕರಿಗೆ ಮಾಹಿತಿಯೇ ಇರಲಿಲ್ಲ. ಯಾರೋ ಬರುತ್ತಾರೆ, ಯಾರೋ ಗೆಲ್ಲುತ್ತಾರೆ ಎಂದೂ ಗೊತ್ತಿರದಷ್ಟು ಕ್ಷುಲಕವಾಗಿರುತ್ತಿದ್ದ ಈ ಬಾರಿಯ ಎಂಎಲ್‌ಸಿ ಚುನಾವಣೆ ಹೈ ವೋಲ್ಟೇಜ್‌ನತ್ತ ತಲುಪುತ್ತಿದೆ. ಇದಕ್ಕೆ ಕಾರಣ ರಘುಪತಿ ಭಟ್ ಎಂದರೂ ತಪ್ಪಾಗಲಾರದು
ಎಂಎಲ್‌ಸಿ ಕ್ಷೇತ್ರವನ್ನೂ ರಂಗು ರಂಗಾಗಿಸಿ ಎದುರಾಳಿಗಳಿಗೆ ಬಲವಾಗಿ ಸೆಡ್ಡು ಹೊಡೆಯಲು ಸೆಟೆದು ನಿಂತಿರುವ ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನು ಸೋಲಿಸಲು ಸ್ವತಃ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೆ ದೆಹಲಿಯಿಂದ ಇಳಿದು ಬರುತ್ತಾರೆ, ಬಾಯಿಗೆ ಬಂದಂತೆ ಮಾತಾಡುತ್ತಾರೆ ಎಂದರೆ ಅವರು ಭಟ್ಟರಿಗೆ ಅದೆಷ್ಟು ಬೆಚ್ಚಿಬಿದ್ದಿದ್ದಾರೆ ಎಂದು ಅದರಲ್ಲೇ ಅರ್ಥ ಮಾಡಿಕೊಳ್ಳಬಹುದು.
ನೈರುತ್ಯ ಪದವೀಧರ, ಶಿಕ್ಷಕ ಕ್ಷೇತ್ರ ಚುನಾವಣೆ ಹಿನ್ನಲೆಯಲ್ಲೊ ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಸಂಘ ನಾಯಕರ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್,
ರಘುಪತಿ ಭಟ್, ಈಶ್ವರಪ್ಪ ವಿರುದ್ಧ ಅಸಮಾಧಾನ ಹೊರಹಾಕಿ, ಅಧಿಕಾರದಿಂದ ಇಳಿದು ಸರಿಯಾಗಿ ಒಂದು ವರ್ಷ ಆಗಿಲ್ಲ. ಕೆಲವರು ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ ಎಂಬ ಹೇಳಿಕೆ ನೀಡಿ ಬಿಟ್ಟರು.
ಅಸಲಿಗೆ ಸಂತೋಷರಿಗೆ ತುಳುನಾಡಿನ ಬಿಜೆಪಿ ಕಾರ್ಯಕರ್ತರ ಮಾನಸಿಕತೆಯೇ ಅರ್ಥವಾಗಿಲ್ಲ, ಸಂಘಟನೆ ಮಾಡುವ ಬದಲು ಇವರು ವಿಘಟನೆ ಮಾಡುತ್ತಿದ್ದಾರೆ ಎನ್ನುವುದು ಕಾರ್ಯಕರ್ತರ ಆರೋಪ.
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಹಿಂದೂ ವಿರೋಧಿ ಚಿಂತನೆಗಳನ್ನಿಟ್ಟುಕೊಂಡು, ಹರ್ಷ ಕೊಲೆಯಾದಾಗ ಎಡಪಂಥೀಯರ ಜೊತೆ ಹೆಜ್ಜೆ ಹಾಕಿ ಇದೀಗ ಪಕ್ಷಾಂತರಗೊಂಡು ಬಿಜೆಪಿಗೆ ಬಂದಿರುವ ಓರ್ವ ವ್ಯಕ್ತಿಗೆ ಟಿಕೆಟ್ ನೀಡಿದ್ದು ಯಾಕೆ, ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಲಿಲ್ಲವೇ ಎನ್ನುವುದು ಇಲ್ಲಿಯ ಕಾರ್ಯಕರ್ತರ ಆಕ್ರೋಶ. ಕಾರ್ಯಕರ್ತರ ಆಕ್ರೋಶದ ಪ್ರತೀಕವಾಗಿ ಬಿಜೆಪಿ ವರಿಷ್ಠರ ವೈಯಕ್ತಿಕ ನಿರ್ಧಾರಕ್ಕೆ ಸೆಡ್ಡು ಹೊಡೆದು, ದಾರಿ ತಪ್ಪುತ್ತಿರುವ ಬಿಜೆಪಿ ವರಿಷ್ಠರಿಗೆ ಬುದ್ಧಿ ಕಲಿಸಲು ರಘುಪತಿ ಭಟ್ಟರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಂಬ ಸಣ್ಣ ಸುಳಿವು ಕೂಡಾ ಸಂಘಟನಾ ಕಾರ್ಯದರ್ಶಿಗೆ ತಿಳಿಯದೇ ಹೋಯಿತಾ?
ರಘುಪತಿ ಭಟ್ಟರನ್ನು ಹಾಡಿ ಹೊಗಳಿದ್ದ ಸಂತೋಷ್!
ಕಳೆದ ಬಾರಿ ಎಂಎಲ್‌ಎ ಟಿಕೆಟ್ ಕೈ ತಪ್ಪಿದಾಗ ರಘುಪತಿ ಭಟ್ಟರು ಅದನ್ನು ಸಂತೋಷವಾಗಿಯೇ ಸ್ವೀಕರಿಸಿದ್ದರು. ಆಗ ಬಿಎಲ್ ಸಂತೋಷ್ ಅವರೇ ರಘುಪತಿ ಭಟ್ಟರನ್ನು ಹಾಡಿಹೊಗಳಿದ್ದರು. ಆದರೆ ಇಂದು ಅದೇ ಸಂತೋಷ್ ಬಾಯಿಯಿಂದ ರಘುಪತಿ ಭಟ್ಟರು ತೆಗಳಿಕೆಗೆ ಒಳಗಾಗದರು. ಅಲ್ಲದೆ ದೆಹಲಿಯಿಂದ ಇಳಿದು ತುಳುನಾಡಿಗೆ ಇಳಿದು ತಮ್ಮ ಅಭ್ಯರ್ಥಿ ಬ್ಯಾಟಿಂಗ್ ಮಾಡಬೇಕಾದ ಪರಿಸ್ಥಿತಿ ಬಂದಿದೆ ಅಂದರೆ ಸಂತೋಷ್ ಭಟ್ಟರಿಗೆ ಅದೆಷ್ಟು ಭಯಗೊಂಡಿದ್ದಾರೆಂದು ಅರ್ಥ ಮಾಡಿಕೊಳ್ಳಬಹುದು. ಪಕ್ಷದ ಓರೆಕೋರೆಗಳನ್ನು ಸರಿಪಡಿಸದೆ ಹೊರಗಿನಿಂದ ಬಂದವರಿಗೆ ಮಣೆ ಹಾಕುವ ತನಕ ಇಂತಾ ಡಿಚ್ಚಿಗಳನ್ನು ಬಿಜೆಪಿ ವರಿಷ್ಠರು ಹೊಡೆಸಿಕೊಳ್ಳಲೇಬೇಕಾಗುತ್ತದೆ ಎನ್ನುವುದು ಇನ್ನಾದರೂ ಅರ್ಥವಾಗಲಿ. ಆದ್ದರಿಂದ ಈ ಬಾರಿಯ ಚುನಾವಣೆ ವರಿಷ್ಠರಿಗೆ ಪಾಠ ಕಲಿಸುವುದಂತೂ ಸತ್ಯ.