ಉಡುಪಿ: ರಘುಪತಿ ಭಟ್ ನಿಜಕ್ಕೂ ಗೆಲ್ಲಬೇಕು,ಹಾಗಂತ ಬಿಜೆಪಿಯವರು ಮಾತ್ರವಲ್ಲ, ಪಕ್ಷದ ಹೊರಗಿನವರು ಆಶಯ ವ್ಯಕ್ತಪಡಿಸಿದ್ದಾರೆ.ರಘುಪತಿ ಭಟ್ ಶಾಸಕರ ಅವಧಿಯಲ್ಲಿ ಉಡುಪಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ. ಇದನ್ನು ಉಡುಪಿ ನಗರವನ್ನು ನೋಡಿದವರು ಹೇಳುತ್ತಾರೆ. ಭಾಗಶ: ತನ್ನ ವೈಯಕ್ತಿಕ ಸ್ವಾರ್ಥ ಚಿಂತನೆಗಳನ್ನು ಬದಿಗಿಟ್ಟು ಪಕ್ಷಕ್ಕಾಗಿ ತ್ಯಾಗ ಮಾಡಿದ ಅಪರೂಪದ ಮುಖಂಡರು ಭಟ್ಟರು. ಪ್ರಮೋದ್ ಮಧ್ವರಾಜ್ ಅವರಿಂದ ಹಿಡಿದು ಯಶ್ ಪಾಲ್ ತನಕ ಬಿಜೆಪಿಯಲ್ಲಿ ಅವರಿಗೆ ಸ್ಥಾನಮಾನ ಸಿಗುವಂತೆ ಮಾಡಿದರು. ಜಾತಿ, ಧರ್ಮ ಬದಿಗಿಟ್ಟು ಉಡುಪಿಯ ಮೂಲೆ ಮೂಲೆಯಲ್ಲಿ ಕೆಲಸ ಮಾಡಿದರು. ಟಿಕೆಟ್ ಸಿಗಲಿಲ್ಲ ಅಂತ ಬೇಸರ ಪಡದೆ ತಮ್ಮ ಪಕ್ಷದ ಅಭ್ಯರ್ಥಿಗಾಗಿ ಹಗಲು ರಾತ್ರಿ ದುಡಿದರು. ಟಿಕೆಟ್ ಕೊಡದಿದ್ದಾಗ ಒಂದೇ ಒಂದು ಸೊಲ್ಲು ಪಕ್ಷದ ವಿರುದ್ಧ ಎತ್ತಲಿಲ್ಲ. ಇಂಥವರನ್ನು ಗೆಲ್ಲಿಸಲೇಬೇಕೆಂಬ ದೊಡ್ಡ ಚಳುವಳಿ ಉಡುಪಿಯಲ್ಲಿ ನಡೆಯುತ್ತಿದೆ.