ಪುತ್ತೂರು: ‘ಬಿಳಿ ಪಂಚೆ, ಬಿಳಿ ಅಂಗಿ ಹೆಗಲಿಗೊಂದು ಕೇಸರಿ ಶಾಲು, ಗಡ್ಡ ಬಿಟ್ಟು ಮೀಸೆ ತೊಟ್ಟ ಈ ಹುಡುಗನೆಂದರೆ ಇಡೀ ಯುವ ಸಮುದಾಯಕ್ಕೊಂದು ಆದರ್ಶ, ಅದರ ಜೊತೆಗೆ ‘ನಮ್ಮ ಜೊತೆ ಪುತ್ತಿಲರಿದ್ದಾರೆ’ ಎಂಬ ಧೈರ್ಯ ಈ ನಾಡಿನ ಎಳೆಮೀಸೆಯ ಹುಡುಗರದ್ದು…! ಪುತ್ತಿಲರ ಹೋರಾಟ, ಅವರ ಎದೆಗುಂದದ ವಿಶ್ವಾಸ, ಎಲ್ಲವನ್ನೂ ಗೆದ್ದು ನಾನೇನೂ ಗೆದ್ದಿಲ್ಲ ಎಂಬ ಸನ್ಯಾಸಿ ಜೀವನದಲ್ಲಿ ಬದುಕಿದ ನಿಮ್ಮ ಈ ಬಾಳಲ್ಲಿ ಬಿರುಗಾಳಿ ಎದ್ದಿದ್ದೇಕೆ? ಅಷ್ಟಕ್ಕೂ ನಿಮ್ಮ ಮೇಲೆ ಬಂದಿರುವ ಆರೋಪಗಳು ಸತ್ಯವೇ? ಸುಳ್ಳಾಗಿದ್ದರೆ ಅದನ್ನು ಎದೆ ತಟ್ಟಿ ಹೇಳಲಿಲ್ಲವೇಕೆ? ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವ ವೇದಾಂತವೇ? ಅಥವಾ ಹೌದು ನನ್ನದು ಪ್ರಮಾದ ಎನ್ನುವ ಪಶ್ಚಾತಾಪವೇ? ಈಗ ಬೇಕಿರುವುದು ನಿಮ್ಮ ಮೌನವಲ್ಲದ ಉತ್ತರ. ಒಂದು ವೇಳೆ ನಿಮ್ಮ ಮೇಲೆ ಷಡ್ಯಂತ್ರ ನಡೆದಿದ್ದರೆ ಈ ಹುರಿಮೀಸೆಯ ಹುಡುಗರು ನಿಮ್ಮ ಜೊತೆ ನಿಲ್ಲಲಿದ್ದಾರೆ. ಷಡ್ಯಂತ್ರವಾಗಿದ್ದರೆ ನಿಮ್ಮ ಪರವಾಗಿ ಹೋರಾಟಕ್ಕಿಳಿದು ನಿಮ್ಮನ್ನು ಇನ್ನೂ ಎತ್ತರದ ಸ್ಥಾನದಲ್ಲಿ ಪ್ರತಿಷ್ಠಾಪಿಸಲಿದ್ದಾರೆ. ಅಷ್ಟಕ್ಕೂ ನಿಮ್ಮ ಮೌನವೇಕೆ? ಪುತ್ತೂರಿನಲ್ಲಿ ಕಾರನ್ನೇ ಅಲುಗಾಡಿಸಿ ಇಡೀ ಸರಕಾರವನ್ನೇ ಅಲುಗಾಡಿಸಿ ತಮಗೆ ಈ ಮೌನವೃತವೇಕೆ?
ಇಂಥದೊಂದು ಪ್ರಶ್ನೆಯನ್ನು ಪುತ್ತಿಲ ಅಭಿಮಾನಿಗಳು ಕೇಳಲಾರಂಭಿಸಿದ್ದಾರೆ. ಅಂದು ವಿಧಾನ ಸಭೆಯಲ್ಲಿ ಸೋತು ಕಾಂಗ್ರೆಸನ್ನು ಗೆಲ್ಲಿಸಿ ‘ಪುತ್ತಿಲ ಅಭಿಮಾನಿಗಳ ಸಂಘ ಕಟ್ಟಿಕೊಂಡು ಮುಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲೆಂದು ತಯಾರಿ ನಡೆಸಿದ್ದ ಪುತ್ತಿಲರು ಕೊನೆಗೆ ತನ್ನ ಸಂಘವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.
ಇರಲಿ ಅದು ನಿಮ್ಮ ಇಷ್ಟ ಎಂದು ಅಭಿಮಾನಿಗಳು ತಣ್ಣಗಾದರು. ತನ್ನ ಪಾಡಿಗೆ ತಾವಿದ್ದ ಪುತ್ತಿಲರ ಮೇಲೆ ಇದೀಗ ಆರೋಪವೊಂದು ಕೇಳಿಬಂದಿದೆ. ಕೇಳಿಬಂದು ಸುಮಾರು ದಿನಗಳಾಗಿವೆ. ಆದರೆ ಪುತ್ತಿಲರು ಮಾತ್ರ ಮಾತಾಡುತ್ತಿಲ್ಲ. ಇದು ಇವರ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದು, ‘ಅರೆ ಏನಾಯಿತು ಪುತ್ತಿಲರೇ?’ ಎಂದು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಪುತ್ತಿಲರ ಮೇಲೆ ಬಂದ ಆರೋಪವೇನು?
ಪುತ್ತಿಲ ಬಿಜೆಪಿ ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ಮಹಿಳೆಯೊಬ್ಬರ ಬಳಿ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಅದಂತೆ. ಅಷ್ಟಕ್ಕೂ ಈ ವಾಯ್ಸ್ ಪುತ್ತಿಲರದ್ದೋ ಅಥವಾ ನಕಲಿಯೋ ಗೊತ್ತಾಗಿಲ್ಲ. ನಕಲಿಯಾಗಿದ್ದರೆ ಪುತ್ತಿಲರದ್ದು ಮೌನವೃತವೇಕೆ? ಅದು ತನ್ನದಲ್ಲ ಎಂದು ಹೇಳಿದ್ದರೆ ಪುತ್ತಿಲರ ಗಂಟೇನು ಹೋಗುತ್ತಿತ್ತು? ಇದು ಅಭಿಮಾನಿಗಳ ಪ್ರಶ್ನೆ.
ಪುತ್ತಿಲ ಮಹಿಳೆಯೊಂದಿಗೆ ಮಾತನಾಡಿದ್ದಾರೆ ‘ಎನ್ನಲಾದ’ ತನ್ನ ಬಿಜೆಪಿ ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ ‘ಎನ್ನಲಾದ’ ಮಹಿಳೆ ಜೊತೆಗಿನ ಆಡಿಯೋ ಫುಲ್ ವೈರಲ್ ಆಗಿದ್ದು, ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.
ಸದ್ಯ ಅವರೀಗ ಬಿಜೆಪಿ ನಾಯಕಿಯೊಬ್ಬರ ಬಳಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನಿ ಹೋಲುವ ವ್ಯಕ್ತಿ ‘ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ’, ಅದೆಲ್ಲಾ ಬಿಟ್ಟವರೇ ಪೊಲಿಟೀಶಿಯನ್. ಮಾನ ಮರ್ಯಾದೆ ಎರಡನ್ನೂ ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾದ್ಯವಿಲ್ಲ ಎಂದು ಆ ಮಹಿಳೆಯ ಜೊತೆ ಹೇಳಿದ್ದಾರೆ.
ಮಾನ ಮರ್ಯದೆ ಬಿಟ್ಟಿದ್ದರಿಂದಲೇ ಪರಿವಾರದ ಜನ ದೊಡ್ಡವರಾಗಿದ್ದಾರೆ. ಇನ್ನೂ ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ ‘ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ಮಹಿಳೆ ಮಾತನಾಡಿದ್ದಾಳೆ.
ಅರುಣ್ ಪುತ್ತಿಲ ಅವರದ್ದೆನ್ನಲಾದ ವೈರಲ್ ಆಡಿಯೋದಲ್ಲಿ, ಅವರು ಹಣ ತೆಗೆದುಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಬಿಜೆಪಿ ನಾಯಕಿ ನೀವು ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಾಗ ಹೆಚ್ಚಿನ ವಿಚಾರವನ್ನು ಮಾತನಾಡುವುದಾಗಿ ಹೇಳಿದ್ದಾರೆ. ಬಳಿಕ ಆ ಮಹಿಳೆ ಈಗ ಆಡಿಯೋ ರೆಕಾರ್ಡ್ ಮಾಡಿ ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇದು ಪುತ್ತಿಲರದ್ದು ಎನ್ನಲಾದ ಆಡಿಯೋ ಸಂಭಾಷಣೆಯ ಇಣುಕು ನೋಟ. ಆಡಿಯೋ ವೈರಲ್ ಆಗಿ ಇಷ್ಟು ದಿನಗಳಾಗಿವೆ. ಆದರೆ ಪುತ್ತಿಲರದ್ದು ಪ್ರತ್ಯುತ್ತರವಿಲ್ಲ. ಇದರ ಬಗ್ಗೆ ಸಮಜಾಯಿಷಿ ನೀಡಿದ್ದರೆ ಅಭಿಮಾನಿಗಳು ನಿರುಮ್ಮಳವಾಗುತ್ತಿದ್ದರು. ಆದರೆ ಪುತ್ತಿಲ ಮಾತಾಡುತ್ತಿಲ್ಲ ಯಾಕೆ ಎನ್ನುವುದು ಅಭಿಮಾನಿಗಳ ಪ್ರಶ್ನೆ.
ಒಂದು ವೇಳೆ ಇದು ನಕಲಿಯಾಗಿದ್ದರೆ ಪುತ್ತಿಲರೇಕೆ ದೂರು ಕೊಡಲಿಲ್ಲ? ಯಾಕೆ ಸಮಜಾಯಿಷಿ ನೀಡಲಿಲ್ಲ?ಹಾಗಾದರೆ ರಿಲೀಸ್ ಆದ ಆಡಿಯೋ ನಿಜವಾ? ಇಂಥದೆಲ್ಲಾ ಗುಮಾನಿಯಲ್ಲಿರುವ ಪುತ್ತಿಲರ ಅಭಿಮಾನಿಗಳು ಗೊಂದಲದಲ್ಲಿದ್ದಾರೆ.
‘ಕಾರು ಅಲುಗಾಡಿಸಿ ನಾಯಕನಾಗಲು ಹೊರಟವನ —ಕ್ಕಿಯ ಗೂಟದ ದ್ರಾಕ್ಷಿಯ ಗೊಂಚಲು ಅಲ್ಲಾಡುತ್ತಿದೆ, ಕರ್ಮ ಯಾರನ್ನೂ ಬಿಟ್ಟಿಲ್ಲ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳ ರೋಷ ಹುಟ್ಟಿದ್ಯಾಕೆ?