ಕಾಸರಗೋಡು: 14 ವರ್ಷದ ಬಾಲಕನ ಜೊತೆಗೆ 35 ವರ್ಷದ ಮಹಿಳೆ ಪರಾರಿಯಾದ ಘಟನೆ ಪಾಲ್ಘಾಟ್‌ನಲ್ಲಿ ನಡೆದಿದೆ.
ಆಲತ್ತೂರು ಕುನ್ನಿಕೇರಿಯ ಕುದಿರಪ್ಪಾರ ಎಂಬಲ್ಲಿ 14 ವರ್ಷದ ಬಾಲಕ ಫೆ. 25 ರಂದು ಶಾಲೆಗೆಂದು ಮನೆಯಿಂದ ತೆರಳಿದ್ದು, ಆ ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಆಲತ್ತೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಬಾಲಕ ತನ್ನ ಸ್ನೇಹಿತನ ತಾಯಿಯ ಜೊತೆಗೆ ಹೋಗಿರುವುದಾಗಿ ಮಾಹಿತಿ ದೊರೆತಿದೆ. ಸದ್ಯ ಎರ್ನಾಕುಳಂನಲ್ಲಿ ಈ ಬಾಲಕನ್ನು ಮತ್ತು ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯ ವಿರುದ್ಧ ಅಪಹರಣದ ಕೇಸು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಬಾಲಕ ಅಪ್ರಾಪ್ತನಾಗಿದ್ದು ಆತನನ್ನು ಜೊತೆಗೆ ಕರೆದೊಯ್ದ ಆರೋಪದಲ್ಲಿ ಮಹಿಳೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗುವ ಸಾಧ್ಯತೆಯೂ ಇದೆ.
ಬಾಲಕನನ್ನು ಕರೆದೊಯ್ದ ಮಹಿಳೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ ಎಂಬ ಮಾಹಿತಿಯನ್ನೂ ಪೊಲೀಸರು ಹೊರ ಹಾಕಿದ್ದಾರೆ.