ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರ ಮೊಬೈಲ್ ಫೋನ್ ಕಾರಿನ ಮೇಲೆ ಬಿದ್ದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಬಸ್ಸು ಪ್ರಯಾಣಿಕನ ಮೊಬೈಲ್ ಕಾರಿನ ಮೇಲೆ ಬಿದ್ದಾಕ್ಷಣ ಕಾರು ಚಾಲಕಿ ಏಕಾಏಕಿ ಬ್ರೇಕ್ ಹಾಕಿದ್ದು, ಇದರಿಂದಾಗಿ ಐದು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಮೊಬೈಲ್ ಬಿದ್ದ ಕಾರಿನ ಹಿಂದೆ ಇದ್ದ ನಾಲ್ಕು ಕಾರುಗಳು ಪರಸ್ಪರ ಢಿಕ್ಕಿ ಹೊಡೆದಿವೆ.
ಅಪಘಾತಕ್ಕೊಳಗಾದ ಕಾರುಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.