ಮಂಗಳೂರು: ಸಾಲದ ಆ್ಯಪ್‌ನಿಂದ ಕಿರುಕುಳಕ್ಕೆ ಸಂಬಂಧಿಸಿದ ಹಾಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲು ಮಾಡಿದ್ದಾರೆ.
ಸಾಲದ ಆ್ಯಪ್ ಮೂಲಕ ಪಡೆದ ಹಣವನ್ನು ಮರುಪಾವತಿ ಮಾಡಿದರೂ, ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದ ಆ್ಯಪ್ ವಿರುದ್ದ ದೂರು ದಾಖಲಾಗಿರುವುದಾಗಿದೆ.
ಯೂಟ್ಯೂಬ್ ನೋಡುತ್ತಿದ್ದ ವೇಳೆ ಸ್ಕೋರೆಪ್ರೋ ಎಂಬ ಸಾಲ ನೀಡುವ ಆ್ಯಪ್ ಕಂಡುಬಂದಿದ್ದು, ಅದನ್ನು ಬಳಸಿಕೊಂಡು ವ್ಯಕ್ತಿ 38 ಸಾವಿರ ರೂ. ಸಾಲಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಅವರ ಅಕೌಂಟ್ ಗೆ 23,800 ರೂ. ಜಮೆಯಾಗಿದೆ. ಆ ಬಳಿಕ ಸಾಲ ಮರುಪಾವತಿ ಮಾಡುವಂತೆ ಸಂದೇಶಗಳು ಬಂದಿದ್ದು ಎರಡು ಬಾರಿ ಒಟ್ಟು 62,100 ರೂ. ಗಳನ್ನು ಅವರು ಮರುಪಾವತಿಸಿದ್ದಾರೆ.
ಆದರೆ ಈ ಆ್ಯಪ್‌ನ ಸಿಬ್ಬಂದಿ ಹೆಚ್ಚುವರಿ ಹಣಕ್ಕೆ ಕೇಳಿದ್ದು, ದೂರುದಾರರ ಹೆತ್ತವರ ಭಾವಚಿತ್ರಕ್ಕೆ ಅಶ್ಲೀಲ ವಿಡಿಯೋಗಳನ್ನು ಎಡಿಟ್ ಮಾಡಿ ದೂರುದಾರರ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಇದರ ಹಿಂದಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.