ಚಿಕ್ಕಮಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಕಡೂರು ತಾಲೂಕಿನ ವಡೇರಹಳ್ಳಿ ತಾಂಡ್ಯದಲ್ಲಿ ನಡೆದಿದೆ.
7 ಗುಂಟೆ ಜಮೀನಿಗಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಎರಡು ಗುಂಪುಗಳು ಮನ ಬಂದ ಹಾಗೆ ಕಬ್ಬಿಣದ ಸಲಾಕೆ ಬಳಸಿ ಬಡಿದಾಡಿಕೊಂಡಿದ್ದಾರೆ. ಪರಮೇಶ್ ಹಾಗೂ ಬೀರೇಗೌಡ ಕುಟುಂಬಗಳ ನಡುವೆ ಹೊಡೆದಾಡಿಕೊಂಡಿರುವುದಾಗಿದೆ.
ಬೀರೇಗೌಡರ ಜಮೀನು ಪರಮೇಶ್ ಸ್ವಾಧೀನದಲ್ಲಿದ್ದು, ಈ ಸಂಬಂಧ ಹಲವು ವರ್ಷಗಳಿಂದ ಕಿರಿಕ್ ನಡೆಯುತ್ತಿದೆ. ಈ ಸಂಬಂಧ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಈ ಸಂಬಂಧ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಪರಮೇಶ್ ಕುಟುಂಬ ಬೀರೇಗೌಡರ ಕುಟುಂಬದ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.