ವಿಜಯಪುರ: 2 ಕಂಟ್ರಿ ಪಿಸ್ತೂಲು ಮತ್ತು 4 ಜೀವಂತ ಗುಂಡುಗಳನ್ನು ಮಾರಾಟ ಮಾಡುವುದಕ್ಕೆಂದು ಇರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂಡಿ ಬೈಪಾಸ್ ಬಳಿಯಲ್ಲಿ ನಡೆದಿದೆ.
ಗ್ಯಾಂಗ್ ಬಾವಡಿ ಕುಂಬಾರ ಗಲ್ಲಿಯ ಉಮರ್ ಬಂದೇನವಾಜ್ ಗಿರಿಗಾಂವ ಎಂದು ಬಂಧಿತ ಆರೋಪಿಯನ್ನು ಗುರುತಿಸಲಾಗಿದೆ.
ಅನಧಿಕೃತವಾಗಿ ಈತ ಕಂಟ್ರಿ ಪಿಸ್ತೂಲ್ ಖರೀದಿಸಿ, ಮಾರಾಟ ಮಾಡಲು ನೋಡುತ್ತಿದ್ದ ಎನ್ನುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿದೆ.
ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.