ಬೆಳ್ತಂಗಡಿ: ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಕಣಿಯೂರು ನಿವಾಸಿ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ಪಡಂಗಡಿಯ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಎಂಬವರ ಪತ್ನಿ ಪೂಜಾಶ್ರೀ(23) ಎಂದು ಗುರುತಿಸಲಾಗಿದೆ.
ಕೆಲಸ ಹುಡುಕುತ್ತಿದ್ದ ಪತ್ನಿ ಪೂಜಾ ಅವರನ್ನು ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಅಲ್ಲಿಯೇ ಅವರು ನೇಣಿಗೆ ಶರಣಾಗಿರುವುದಾಗಿದೆ. ಪ್ರಕಾಶ್ ಅವರು ಕೃಷಿಕರಾಗಿದ್ದು, ಕಳೆದ 10 ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು.
ಪೂಜಾ ಆತ್ಮಹತ್ಯೆಯ ಬಗ್ಗೆ ಅವರ ಪೋಷಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ಕೇಸು ದಾಖಲಾಗಿದೆ