ಬಂಟ್ವಾಳ: ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆಯಾಗಿ 8 ದಿನಗಳು ಕಳೆದಿವೆ. ಆತನ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಹಿಂದೆ ಬಂಟ್ವಾಳದಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಈ ಪ್ರಕರಣ ಬೇಧಿಸಲು ಪೊಲೀಸ್ ಇಲಾಖೆ ಅವಿರತ ಪ್ರಯತ್ನ ನಡೆಸುತ್ತಿದೆ.
ಒಂದು ಮೂಲದ ಪ್ರಕಾರ ಸಿಕ್ಕ ಮಾಹಿತಿಯಂತೆ ದಿಗಂತ್ ಇರುವಿಕೆಯ ಮಾಹಿತಿ ಸಿಕ್ಕಿದ್ದರೂ, ಆತ ಆಗಾಗ್ಗೆ ಸ್ಥಳ ಬದಲಾವಣೆ ಮಾಡುತ್ತಿದ್ದು, ಈ ಅಂಶ ತನಿಖೆಗೆ ತೊಡಕಾಗಿ ಬಾಧಿಸಿದೆ. ಆತ ತನ್ನ ಮೊಬೈಲ್ ಸಹ ಬಿಟ್ಟು ಹೋಗಿದ್ದು, ಇದರಿಂದ ಆತನನ್ನು ಟ್ರೇಸ್ ಮಾಡುವುದು ಸಾಧ್ಯವಾಗಿಲ್ಲ. ಆತ ಮಾಡಿರುವ ಈ ಹಿಂದಿನ ಚಾಟ್ ಹಿಸ್ಟರಿಯ ಆಧಾರದಲ್ಲಿ ಆತ ಯಾತಕ್ಕಾಗಿ ಮತ್ತು ಯಾವ ಕಡೆಗೆ ಸಾಗಿರಬಹುದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಹಾಗೆಯೇ ಬಂಟ್ವಾಳಕ್ಕೆ ಸಂಬಂಧಿಸಿದ ಪ್ರದೇಶ ವೊಂದರ ವ್ಯಕ್ತಿ ದಿಗಂತ್‌ನನ್ನು ಸಂಪರ್ಕಿಸಿದ್ದರ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ.