ಗುಂಡ್ಲುಪೇಟೆ: ದಂಪತಿ ಮತ್ತು ಮಗುವನ್ನು ಅಪಹರಣ ಮಾಡಿರುವ ಘಟನೆ ಬಂಡೀಪುರದ ಪಕ್ಕದಲ್ಲೇ ಇರುವ ಕಂಟ್ರಿಕ್ಲಬ್ ರೆಸಾರ್ಟ್‌ನಲ್ಲಿ ನಡೆದಿದೆ.
ಅಪಹರಣಕ್ಕೆ ಒಳಗಾದವರನ್ನು ಬಿಬಿಎಂಪಿಯಲ್ಲಿ ಎಫ್‌ಡಿಎ ಆಗಿರುವ ನಿಶಾಂತ್, ಅವರ ಪತ್ನಿ ಚಂದನ ಮತ್ತು ಅವರ ಮಗು ಎಂದು ಗುರುತಿಸಲಾಗಿದೆ.
ಕಳೆದ ರವಿವಾರ ಅವರು ಕಂಟ್ರಿಕ್ಲಬ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಸೋಮವಾರ ನಿಶಾಂತ್ ತಮ್ಮ ಕುಟುಂಬದ ಜೊತೆಗೆ ಕಾರಿನಲ್ಲಿ ಹೊರ ಬಂದಾಗ ಅವರನ್ನು ಅಪಹರಣ ಮಾಡಲಾಗಿದೆ. ಕಾರಿನ ಸಮೇತ ಈ ಮೂವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಬಿ. ಟಿ. ಕವಿತಾ ಮತ್ತು ಇನ್ನಿತರ ಅಧಿಕಾರಿಗಳ ತಂಡ ರೆಸಾರ್ಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.