ಪುತ್ತೂರು: ಸಾಲ ವಸೂಲಿ ಮಾಡುವವರ ಕರೆ ಸ್ವೀಕರಿಸಿದ ಬೆನ್ನಲ್ಲೇ ಆಟೋ ಚಾಲಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಿಯತ್ತೋಡಿಯಲ್ಲಿ ನಡೆದಿದೆ.
ಮೃತರನ್ನು ಕೃಷ್ಣ(40) ವರ್ಷ ಎಂದು ಗುರುತಿಸಲಾಗಿದೆ.
ಶಾಲಾ ಮಕ್ಕಳನ್ನು ಬೆಳಗ್ಗೆ ತಮ್ಮ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಮರಳಿದ್ದು, ಮಧ್ಯಾಹ್ನದ ಸುಮಾರಿಗೆ ಅವರಿಗೆ ಸಾಲ ವಸೂಲಿಗಾರರು ಕರೆ ಮಾಡಿದ್ದರು. ಆ ಬಳಿಕ ಅವರು ಮನೆಯ ಸಮೀಪದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.