ಬೆಳಗಾವಿ: ಪ್ರೇಯಸಿಯ ಕತ್ತು ಕೊಯ್ದು ಹತ್ಯೆ ಮಾಡಿ ಬಳಿಕ ಪ್ರೇಮಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಷಹಾಪುರದ ನವೀಗಲ್ಲಿಯಲ್ಲಿ ನಡೆದಿದೆ.
ಹತ್ಯೆಗೆೊಳಗಾದ ಯುವತಿಯನ್ನು ಐಶ್ವರ್ಯ ಮಹೇಶ ಲೋಹಾರ(18) ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೊಂದು ಬಳಿಕ ಪಾಗಲ್ ಪ್ರೇಮಿ ಪ್ರಶಾಂತ ಯಲ್ಲಪ್ಪ ಕುಂಡೇಕರ(29) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಶಾಂತ್ ತನ್ನ ಪ್ರೇಯಸಿ ಐಶ್ವರ್ಯಳ ಚಿಕ್ಕಮ್ಮನ ಮನೆಗೆ ಬಂದು ಆಕೆಯನ್ನು ಮದುವೆಯಾಗುವುದಾಗಿ ಹೇಳಿದ್ದಾನೆ. ಅದಕ್ಕೆ ಐಶ್ವರ್ಯ ಮನೆಯವರು ಸ್ವಲ್ಪ ಸಮಯದ ಬಳಿಕ ವಿವಾಹ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ಇದನ್ನು ಒಪ್ಪಿಕೊಳ್ಳದ ಪ್ರಶಾಂತ್ ಪ್ರೇಯಸಿಗೆ ವಿಷ ಕುಡಿಸಲು ಪ್ರಯತ್ನಿಸಿ ಅದನ್ನು ಆಕೆ ನಿರಾಕರಿಸಿದಾಗ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಬಳಿಕ ಚಾಕುವಿನಲ್ಲಿ ತನ್ನ ಕತ್ತನ್ನೇ ಸೀಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಹಾಪುರ ಪೊಲೀಸು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.