ಹಾಸನ: ಪಿಯುಸಿ ಪರೀಕ್ಷೆ ಬರೆದು ಗೊರೂರಿನ ಹೇಮಾವತಿ ನದಿಯಲ್ಲಿ ಈಜಾಟಕ್ಕೆ ತೆರಳಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಶವಕ್ಕಾಗಿ ಹುಡುಕಾಟ ನಡೆದಿದೆ.
ಮೃತ ಯುವಕನನ್ನು ರಘು (18) ಎಂದು ಗುರುತಿಸಲಾಗಿದೆ.
ಇಬ್ಬರು ಗೆಳೆಯರ ಜೊತೆಗೆ ಹೇಮಾವತಿ ನದಿಗೆ ಈಜಲು ತೆರಳಿದ್ದು, ಈಜು ಬಾರದ ಹಿನ್ನೆಲೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿದೆ. ಆತನ ಶವಕ್ಕಾಗಿ ಸ್ಥಳೀಯರು ಹಾಗೂ ಈಜುಪಟುಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾಗಿ ತಿಳಿದು ಬಂದಿದೆ.