ಮಂಗಳೂರು: ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಹೈಕೋರ್ಟ್ನ ದ್ವಿಸದಸ್ಯ ವಿಭಾಗೀಯ ಪೀಠಕ್ಕೆ ವಕೀಲರುಗಳಾದ ಸಚಿನ್ ನಾಯಕ್, ಅಕ್ಷಯ್ ಆಳ್ವ ಮತ್ತು ಅಖಿಲೇಶ್ವರಿ ಅವರು ಅರ್ಜಿ ಸಲ್ಲಿಕೆ ಮಾಡಿರುವುದಾಗಿದೆ. ನಾಪತ್ತೆಯಾದ ಹುಡುಗ ದಿಗಂತ್ನ ತಂದೆಯ ಪರವಾಗಿ ಈ ಅರ್ಜಿ ಸಲ್ಲಿಸಲಾಗಿದೆ. ಪೋಲೀಸರ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವುದನ್ನೂ ಪೀಠದ ಗಮನಕ್ಕೆ ತರಲಾಗಿದೆ.
ಇನ್ನು ದಿಗಂತ್ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸದನದ ಶೂನ್ಯ ವೇಳೆಯಲ್ಲಿ ಸ್ಪೀಕರ್ ಯು. ಟಿ. ಖಾದರ್ ಪ್ರಸ್ತಾಪಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.