ಬೆಂಗಳೂರು: ದುಬೈನಿಂದ ಅಕ್ರಮವಾಗಿ 14 ಕೆಜಿ ಚಿನ್ನವನ್ನು ತಂದು ಪೊಲೀಸರ ಅತಿಥಿಯಾಗಿರುವ ನಟಿ ರನ್ಯಾ ಸದ್ಯ ಲಾಯರ್‌ಗಳ ಮುಂದೆ ಕಣ್ಣೀರಿಡುವ ಸ್ಥಿತಿ ತಂದುಕೊಂಡಿದ್ದಾರೆ.
ರನ್ಯಾ ಅವರನ್ನು ಕೋರ್ಟಿಗೆ ಹಾಜರುಪಡಿಸಿ ಕರೊದೊಯ್ಯುವ ಸಂದರ್ಭದಲ್ಲಿ ತಮ್ಮ ವಕೀಲರನ್ನು ಭೇಟಿ ಮಾಡಲು ರನ್ಯಾಗೆ ಅಧಿಕಾರಿಗಳು ಅವಕಾಶ ನೀಡಿದ್ದರು. ಈ ಸಂದರ್ಭದಲ್ಲಿ ವಕೀಲರ ಮುಂದೆ ಅಲವತ್ತುಕೊಂಡಿರುವ ಅವರು, ನಾನು ತಪ್ಪು ಮಾಡಿದ್ದೇನೆ. ತಪ್ಪು ಮಾಡದೇ ಇರುತ್ತಿದ್ದರೆ ನನಗೆ ಇಂತಹ ಸಂಕಷ್ಚದ ದಿನಗಳು ಎದುರಾಗುತ್ತಿರಲಿಲ್ಲ. ಕಣ್ಣು ಮುಚ್ಚಿದರೆ ನನಗೆ ವಿಮಾನ ನಿಲ್ದಾಣದ ಘಟನೆಯೇ ನೆನಪಾಗುತ್ತಿದೆ. ನಿದ್ರಿಸಲೂ ಸಾಧ್ಯವಾಗುತ್ತಿಲ್ಲ. ದಯಮಾಡಿ ಇಂತಹ ಸ್ಥಿತಿಯಿಂದ ನನ್ನನ್ನು ಪಾರು ಮಾಡಿ ಎಂದು ಅತ್ತಿದ್ದಾರೆ.
ನಾನು ಇಂತಹ ಕೃತ್ಯದಲ್ಲಿ ಹೇಗೆ ಸಿಲುಕಿದೆ ಎನ್ನುವುದೇ ತಿಳಿಯುತ್ತಿಲ್ಲ. ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಕಾಪಾಡಿ ಎಂದು ವಕೀಲರ ಬಳಿ ವಿನಂತಿಸಿಕೊಂಡಿದ್ದಾರೆ.