ವಿಜಯಪುರ: ವಿದ್ಯಾರ್ಥಿಗಳ ಜೊತೆಗೆ ಅಸಭ್ಯ ವರ್ತನೆ ತೋರಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಬಿಇಒ ಬಸವರಾಜ ತಳವಾರ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರದ ಕೆಬಿಎಸ್ ನಂ. 4 ಶಾಲಾ ವಿದ್ಯಾರ್ಥಿನಿಯರ ಜೊತೆಗೆ ಮುಖ್ಯ ಶಿಕ್ಷಕ ಜಗದೀಶ್ ಅಕ್ಕಿ, ಸಹ ಶಿಕ್ಷಕ ಎಂ.ಕೆ. ಪಾಟೀಲ್ ಅಸಭ್ಖವಾಗಿ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ ವರ್ತನೆ, ಬ್ಯಾಡ್ ಟಚ್‌ಗೆ ಸಂಬಂಧಿಸಿದ ಹಾಗೆ ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಅವರನ್ನು ಅಮಾನತು ಮಾಡಲಾಗಿದೆ.