ಮಂಗಳೂರು: ಕದ್ರಿ ದೇವಸ್ಥಾನದ ಸಮೀಪ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಟೆಂಪೋವನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ಕದ್ರಿ ಠಾಣಾ ಪೊಲೀಸರ ವಶಕ್ಕೆ ನೀಡಿದ್ದಾರೆ.
ಅಕ್ರಮವಾಗಿ ಗೋ ಮಾಂಸವನ್ನು ಟೆಂಪೋ ಒಂದರಲ್ಲಿ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಭಜರಂಗದಳದ ಕಾರ್ಯಕರ್ತರು ಕದ್ರಿ ದೇಗುಲದ ದ್ವಾರದ ಬಳಿ ಟೆಂಪೋವನ್ನು ಹಿಡಿದಿದ್ದಾರೆ. ಆ ಸಮಯದಲ್ಲಿ ಅದರಲ್ಲಿ ಗೋಮಾಂಸ ಇರುವುದು ಕಂಡುಬಂದಿದೆ. ಸುಮಾರು 100 ಕೆಜಿಗೂ ಅಧಿಕ ಗೋಮಾಂಸವನ್ನು ಟೆಂಪೋದಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ತಕ್ಷಣವೇ ಈ ವಿಚಾರವನ್ನು ಪೊಲೀಸರ ಗಮನಕ್ಕೂ ತರಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಗೋಮಾಂಸ ಮತ್ತು ವಾಹನವನ್ನು ಜಪ್ತಿ ಮಾಡಿದ್ದಾರೆ.