ಹುಣಸೂರು: ಮಗು ತನ್ನ ಮಾತನ್ನು ಕೇಳಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಕೈ ಮುರಿದ ಘಟನೆ ನಡೆದಿದೆ.
ಹನಗೋಡು ಹೋಬಳಿಯ ಆನಂದ್ ಬಂಧಿತ ಆರೋಪಿ.
ಆರೋಪಿ ತನ್ನ ಪತ್ನಿಯ ಅಕ್ಕನ ಮಗಳು ತನ್ನ ಮಾತು ಕೇಳಿಲ್ಲ ಎನ್ನುವುದನ್ನು ಕಾರಣವಾಗಿಟ್ಟುಕೊಂಡು ಆಕೆಯ ಮೇಲೆ ಸ್ಕ್ರೂಡ್ರೈವರ್, ರಿಪೀಸ್ ಪಟ್ಟಿಯಲ್ಲಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಬಾಲಕಿಯರ ಎರಡೂ ಕೈಗಳ ಮೂಳೆ ಮುರಿದಿದ್ದಾನೆ. ಈ ಘಟನೆಯಲ್ಲಿ ಆಕೆಯ ತಲೆಗೂ ಗಾಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಕೃತ್ಯ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬೆಳವಾಡಿಯಲ್ಲಿ ಪೊಲೀಸರು ಬಂಧಿಸಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.