ಹಾವೇರಿ: ಬೈಕ್ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಬಿದ್ದಿದ್ದ ವ್ಯಕ್ತಿಯ ಶವವೊಂದು ಬಂಕಾಪುರ ಪಟ್ಟಣದ ಹೊರವಲಯದಲ್ಲಿ ವರದಿಯಾಗಿದೆ.
ಮೃತನನ್ನು ಮುಂಡಗೋಡ ತಾಲೂಕಿನ ಕಾತೂರು ಗ್ರಾ.ಪಂ. ವ್ಯಾಪ್ತಿಯ ಮುಡಸಾಲಿಯ ಮಂಜುನಾಥ ಜಾದವ್ ಎಂದು ಗುರುತಿಸಲಾಗಿದೆ.
ಮಂಜುನಾಥ್ ಶವ ಪಲ್ಸರ್ ಬೈಕ್ನ ಪಕ್ಕದಲ್ಲೇ ರಕ್ತಮಯವಾಗಿ ಬಿದ್ದಿತ್ತು. ಈ ಸಾವು ಅಪಘಾತದಿಂದ ಸಂಭವಿಸಿದೆಯೋ ಇಲ್ಲ ಯಾರಾದರೂ ಕೊಲೆ ಮಾಡಿ ಎಸೆದಿರುವುದೋ ಎಂಬ ಸಂಶಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆ ನಡೆಸಬೇಕಿದೆ.