ಹಾಸನ: ಅಕ್ರಮವಾಗಿ ಹೊರ ರಾಜ್ಯದಿಂದ ಗಾಂಜಾ ತಂದು ಮಾರಾಟ ನಡೆಸಲು ಪ್ರಯತ್ನ ನಡೆಸುತ್ತಿದ್ದ ಇಬ್ಬರು ಮಾವು ಸಮೇತ ಪೊಲೀಸರ ವಶವಾಗಿದ್ದಾರೆ.
ಬಂಧಿತರನ್ನು ಒರಿಸ್ಸಾ ಮೂಲದ ಸಮೀರ್ ಪ್ರಧಾನ್(47), ಗೀತಾ ಪ್ರಧಾನ್ (25) ಎಂದು ಗುರುತಿಸಲಾಗಿದೆ.
ಅರಕಲಗೂಡಿನ ರಾಮನಾಥಪುರದ ಐಬಿ ಸರ್ಕಲ್‌ನಲ್ಲಿ ಆರೋಪಿಗಳು ಗಾಂಜಾ ಮಾರಾಟ ನಡೆಸುತ್ತಿದ್ದ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಿಂದ 10 ಕೆಜಿ 600 ಗ್ರಾಂಗಳಷ್ಟು ತೂಕದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ.