ಗದಗ: ಸ್ಕಿಡ್ ಆಗಿ ರಸ್ತೆಗೆ ಬಿದ್ದ ಬೈಕ್ ಸವಾರಿ ತಲೆಯ ಮೇಲೆ ಸಾರಿಗೆ ಬಸ್ಸು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಳಗುಂದ ನಾಕಾದ ಬಸ್ ಡಿಪೋ ಬಳಿ ನಡೆದಿದೆ.
ಮೃತರನ್ನು ಈರಪ್ಪ ಕಣಗಿನಹಾಳ(50) ಎಂದು ಗುರುತಿಸಲಾಗಿದೆ.
ಈರಪ್ಪ ಅವರು ಮಾರ್ಕೆಟ್ ಏರಿಯಾದಿಂದ ಹುಬ್ಬಳ್ಳಿ ರಸ್ತೆಯತ್ತ ಚಲಿಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಏಕಾಏಕಿ ರಸ್ತೆಗೆ ಬಿದ್ದಿದ್ದು, ಗದಗದಿಂದ ಹಾನಗಲ್ ಮಾರ್ಗವಾಗಿ ಹೊರಟಿದ್ದ ಸರ್ಕಾರಿ ಬಸ್ಸು ಇವರ ತಲೆಯ ಮೇಲೆ ಹರಿದಿದೆ. ವೀರಪ್ಪ ಅವರ ತಲೆ ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.