ಬೆಂಗಳೂರು: ಬಿಡದಿಯ ರೈಲು ನಿಲ್ದಾಣವನ್ನು ಸ್ಫೋಟ ಮಾಡುವುದಾಗಿ ರೈಲ್ವೆ ಕಂಟ್ರೋಲ್ ರೂಂಗೆ ತಡರಾತ್ರಿಯ ವೇಳೆ ದುಷ್ಕರ್ಮಿಗಳು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ರೈಲು ನಿಲ್ದಾಣದಲ್ಲಿ ಪರಿಶೀಲನೆ ಮಾಡಿದ್ದು, ಈ ವೇಳೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿದೆ. ಬಿಡಿ ರೈಲು ನಿಲ್ದಾಣದ ಎಲ್ಲಾ ಕಡೆಗಳಲ್ಲಿ ಮತ್ತು ಪ್ರಯಾಣಿಕರು, ನಿಲ್ದಾಣಕ್ಕೆ ಬರುವವರ ಮೇಲೆ ಅಧಿಕಾರಿಗಳು ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ನಿಗಾ ಇರಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಿಡದಿಯ ಹೆಸರಾಂತ ಕಂಪನಿಯ ಶೌಚಾಲಯದ ಗೋಡೆಯ ಮೇಲೆ ‘ಪಾಕ್ ಪರ ಗೋಡೆ ಬರಹ’ ಕಂಡುಬಂದು ಹುಮೈದ್ ಹುಸೇನ್ ಮತ್ತು ಸಾಧಿಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಈಗ ಬಿಡದಿ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿರುವುದಾಗಿದೆ.