ಉಡುಪಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಮೂರೂವರೆ ಲಕ್ಷ ರೂ. ಬೆಲೆಬಾಳುವ ಚಿನ್ನದ ರಸವನ್ನು ಅಪರಿಚಿತ ವ್ಯಕ್ತಿಯೊಬ್ಬ ಮಣಿಪಾಲ ಶಿವಳ್ಳಿ ಕಾಲೇಜಿನ ಸಮೀಪ ದರೋಡೆ ಮಾಡಿದ ಪ್ರಕರಣ ನಡೆದಿದೆ.
ಮಣಿಪಾಲ್ ಮಕ್ಕಳ ನಿವಾಸಿ ವಸಂತಿ ಎಂಬವರೇ ಸರ ಕಳೆದುಕೊಂಡವರಾಗಿದ್ದಾರೆ.
ವಸಂತ್ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಬಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ಈ ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.