ಗದಗ: ಪೊಲೀಸರು ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್ ನಡೆಸಿದ ಘಟನೆ ಮುಂಡರಗಿ ತಾಲೂಕಿನ ಡೋಣಿ ಮತ್ತು ಡಂಬಳ ಗ್ರಾಮದ ನಡುವೆ ನಡೆದಿದೆ.
ಆರೋಪಿ ಜಯಸಿಂಹ ಮೊಡಕೆರ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈತ ರಾಜ್ಯ, ಅಂತರಾಜ್ಯ ಪೊಲೀಸರಿಗೆ ಈತ ಬೇಕಾಗಿದ್ದ. ದರೋಡೆ, ಕಳ್ಳತನ ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಈತ ಪೊಲೀಸರಿಗೆ ಬೇಕಾಗಿದ್ದ ಅಪರಾಧಿಯಾಗಿದ್ದು, ಈತನನ್ನು ಬಂಧಿಸಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಾಗ ಫೈರಿಂಗ್ ನಡೆಸಲಾಗಿದೆ.
ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್ ಮತ್ತು ಜಯಸಿಂಹ ಮೊಡಕೆರ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಬರುತ್ತಿದ್ದು, ಈ ಸಂದರ್ಭದಲ್ಲಿ ಜಯಸಿಂಹ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಆತನ ಮೇಲೆ ಫೈರಿಂಗ್ ನಡೆಸಿದ್ದಾರೆ.