ಮಂಗಳೂರು; ಬಂಟ್ವಾಳ ಉಪ ವಿಭಾಗದ ಎ ಎಸ್ಪಿ ಆಗಿ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ.
2023 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಯಶ್ ಕುಮಾರ್ ಶರ್ಮ ಅವರು ಮೂಲತಃ ರಾಜಸ್ಥಾನದವರು. ಇವರನ್ನು ಸರಕಾರ ಕೆಳದಿನಗಳ ಹಿಂದೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ ಉಪವಿಭಾಗಕ್ಕೆ ಎಎಸ್ಪಿ ಆಗಿ ಆದೇಶ ಮಾಡಿತ್ತು. ಆ ಆದೇಶವನ್ನು ರದ್ದುಪಡಿಸಿ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗದ ಎ ಎಸ್ಪಿ ಆಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
















