ಹೌದು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಬಹಳ ಕೆಲ ಮಟ್ಟಕ್ಕೆ ಇಳಿದಿದೆ. ರಾಜಕೀಯ ಪಕ್ಷಗಳಿಗೆ ತಮ್ಮ ತಮ್ಮ ಗುರುಸುವಿಕೆ, ತಮ್ಮ ಅಭಿವೃದ್ಧಿ ಕೆಲಸಗಳು, ಮುಂದಿನ ಅಭ್ಯರ್ಥಿಗಳ ದೃಷ್ಟಿ ಕೋನ ಏನು ಎನುವುದು ಬಿಟ್ಟು ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಎಲ್ಲಿಯವರೆಗೆ ಎಂದರೆ ಜಾತಿ, ಜಾತಿ ಮಧ್ಯೆ ವಿಷ ಬಿತ್ತಿದ್ದಾರೆ. ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದಾರೆ, ಸುಳ್ಳು ಸುದ್ದಿಗಳೇ ಅತೀ ಹೆಚ್ಚು ಪ್ರಚಾರ ಪಡೆದವು. ಈ ಎಲ್ಲವನ್ನು ಜನಗಳು ಈ ಬಾರಿ ಬಹಳ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮುಂದೆ ಇದರ ಪರಿಣಾಮ ಕೂಡ ಅಷ್ಟೇ ಪ್ರಭಾವ ಬೀರಲಿದೆ ಎನ್ನುವುದು ಕೂಡ ಅಷ್ಟೇ ಸತ್ಯ!.