ಬೀದರ್: ಕುಡಿತದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಘಟನೆ ಬೀದರ್‌ನ ಬಾಚೇಪಳ್ಳಿಯಲ್ಲಿ ನಡೆದಿದೆ.
ಮೃತನನ್ನು ಶ್ರೀಧರ ಶಿವರಾಜ್(30) ಎಂದು ಗುರುತಿಸಲಾಗಿದೆ.
ಶ್ರೀಧರ್ ಜೊತೆಗೆ ಕಳೆದ ಆರು ವರ್ಷಗಳ ಹಿಂದೆ ಸವಿತಾ ಎಂಬ ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಡ್ರೈವರ್ ಆಗಿದ್ದ ಶ್ರೀಧರ್ ಕುಡಿದು ಬಂದು ಪತ್ನಿಯ ಜೊತೆಗೆ ಜಗಳವಾಡಿ, ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಕವಿತಾ ಫೆ. 25 ರಂದು ತನ್ನ ತಂದೆ ಮತ್ತು ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿಯೂ ಶ್ರೀಧರ್ ತನ್ನ ಪತ್ನಿಯ ಜೊತೆಗೆ ಕುಡಿದು ಬಂದು ರಾತ್ರಿಯಿಡೀ ಗಲಾಟೆ ಮಾಡಿದ್ದ.
ಗಲಾಟೆ ಜೋರಾಗಿ ಪತ್ನಿ ಸವಿತಾ ತನ್ನ ತಂದೆ ಮತ್ತು ತಾಯಿಯ ಸಹಾಯದಿಂದ ಆತನನ್ನು ಕೈಕಾಲುಗಳನ್ನು ಕಟ್ಟಿ, ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಮೃತ ಶ್ರೀಧರನ ತಂದೆ ಶಿವರಾಜ್ ಅವರು ಸಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.