ಬಂಟ್ವಾಳ: ಕೆಲ ಸಮಯದ ಹಿಂದೆ ಖೋಟಾನೋಟು ಚಲಾಯಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು, ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
ಬಿ.ಸಿ.ರೋಡಿನ ಅಂಗಡಿಗಳಲ್ಲಿ 2024 ರಲ್ಲಿ ಖೋಟೋನೋಟುಗಳನ್ನು ಮೂವರು ಆರೋಪಿಗಳು ಚಲಾಯಿಸಿದ್ದರು. ಈ ಪೈಕಿ ಇಬ್ಬರು ಆರೋಪಿಗಳಾದ ಕೇರಳದ ಕಮರುನ್ನೀಸ್ ಮತ್ತು ಮಹಮ್ಮದ್ ಸಿ.ಎ. ಎಂಬವರನ್ನು ಈಗಾಗಲೇ ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಶರೀಫ್ ಸಿ.ಎ. ಎಂಬಾತನನ್ನು ಪೊಲೀಸರು ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
ಅಂಗಡಿಗಳಲ್ಲಿ 100 ರೂ.ಗಳಿಗಿಂತ ಕಡಿಮೆ ಹಣದ ವಸ್ತುಗಳನ್ನು ಖರೀದಿಸಿ 500 ರೂ.ಗಳ ಖೋಟಾನೋಟುಗಳನ್ನು ನೀಡಿ ಚಿಲ್ಲರೆ ಪಡೆಯುತ್ತಿದ್ದರು. ಇವರ ಬಗ್ಗೆ ಸಂಶಯ ಬಂದ ಅಂಗಡಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು ಸದ್ಯ ಕೇರಳದ ವಿದ್ಯಾನಗರದಲ್ಲಿ ಮತ್ತೊಬ್ಬ ಆರೋಪಿಯನ್ನು ಸಹ ಯಶಸ್ವಿಯಾಗಿ ಬಂಧಿಸಿದ್ದಾರೆ. ಈತನ ಬಂಧನಕ್ಕೆ ವಾರಂಟ್ ಸಹ ಜಾರಿಯಾಗಿತ್ತು.