ಬೆಂಗಳೂರು: ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭಿಮಾ ಜ್ಯುವೆಲ್ಲರ್ಸ್ ಮಾಲ್ಹಕರ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಿಮಾ ಜ್ಯುವೆಲ್ಲರ್ಸ್ನ ಮಾಲ್ಹಕರ ಪುತ್ರ ವಿಷ್ಣು ಭಟ್ ಕಳೆದ ಫೆಬ್ರವರಿ 7 ರಂದು ಹೊಟೇಲ್ವೊಂದರ ಬಳಿ ಗಲಾಟೆ ಮಾಡಿದ್ದು, ಫೆಬ್ರವರಿ 26 ರಂದು ಸಹ ಮತ್ತೆ ಹೊಟೇಲ್ ಬಳಿ ಹೋಗಿ ವಿನಾ ಕಾರಣ ಕಿರಿಕಿರಿ ಮಾಡಿದ್ದ. ಜೊತೆಗೆ ಕಬ್ಬಿಣದ ವಸ್ತುವಿನಿಂದ ಹೊಟೇಲ್ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.
ಈ ಬಗ್ಗೆ ಹೊಟೇಲ್ ಸಿಬ್ಬಂದಿ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನನ್ವಯ ವಿಷ್ಣುವನ್ನು ಅರೆಸ್ಟ್ ಮಾಡಲಾಗಿದೆ.