ಪುತ್ತೂರು: ಯುವಕನೊಬ್ಬನ ಮೃತದೇಹವೊಂದು ಕೆರೆಯಲ್ಲಿ ಪತ್ತೆಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪೆರಿಯಡ್ಕದ ಕಿಂಡೋವು ದರ್ಖಾಸು ಮನೆಯ ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ(28) ಎನ್ನುವವರೇ ಮೃತ ದುರ್ದೈವಿ.
ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಕ್ಕೆ ಹೋಗುತ್ತಿದ್ದ ಶ್ರೀನಿವಾಸ್ ಕೆಲ ದಿನಗಳಿಂದ ಮನೆಯಲ್ಲೇ ಇದ್ದರು. ಫೆ. 24 ರಂದು ಕಾಣೆಯಾಗಿದ್ದ ಅವರ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿದೆ.