ಕಾಪು: ಉದ್ಯಾವರದ ಯಶಸ್ವಿ ಫಿಶ್‌ಮೀಲ್ ಸಂಸ್ಥೆಗೆ ಸೈಬರ್ ಕಳ್ಳರು ಉಂಡೆನಾಮ ಹಾಕಿರುವ ಘಟನೆ ನಡೆದಿದೆ.
ಯಸಸ್ವಿ ಫಿಶಿಮೀಲ್ ಮತ್ತು ಆಯಿಲ್ ಕಂಪೆನಿಯ ಸಹ ಸಂಸ್ಥೆ ಸುರಮಿಗೆ ಯಂತ್ರೋಪಕರಣಗಳ ಖರೀದಿಗೆ ಸಂಬಂಧಿಸಿದ ಹಾಗೆ ಹಾಂಕಾಂಗ್‌ನ ಸಂಸ್ಥೆಯೊಂದರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಬಗ್ಗೆ ತಿಳಿದುಕೊಂಡ ಸೈಬರ್ ಕಳ್ಳರು ನಕಲಿ ಐಡಿ ಜೊತೆಗೆ ಯಶಸ್ವಿ ಫಿಶ್‌ಮೀಲ್ ಸಂಸ್ಥೆಯ ಸಂಪರ್ಕ ಸಾಧಿಸಿದೆ. ಜೊತೆಗೆ ತಮ್ಮ ಖಾತೆಗೆ ಫಿಶ್‌ಮೀಲ್ ಸಂಸ್ಥೆಯಿಂದ 2 ಲಕ್ಷ ಡಾಲರ್ ಹಣವನ್ನು ವರ್ಗಾಯಿಸಿಕೊಂಡಿದೆ.
ಈ ವಿಚಾರ ಹಾಂಕಾಂಗ್ ಕಂಪೆನಿಯಿಂದ ಯಶಸ್ವಿ ಫಿಶ್‌ಮೀಲ್ ಸಂಸ್ಥೆಗೆ ವ್ಯಕ್ತಿಯೋರ್ವರು ಆಗಮಿಸಿದ ಬಳಿಕವಷ್ಟೇ ಬೆಳಕಿಗೆ ಬಂದಿದೆ.
ಈ ಸಂಬಂಧ ಕಾಪು ಪೊಲೀಸರಿಗೆ ದೂರು ನೀಡಲಾಗಿದೆ.