ಚಿಕ್ಕಬಳ್ಳಾಪುರ: ವೃದ್ಧೆಯನ್ನು ಬೆದರಿಸಿ ಮನೆಯೊಂದರಿಂದ ಚಿನ್ನಾಭರಣ ದೇೋಚಿದ್ದ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಆರೋಪಿಗಳಾದ ಕಾಂಚನ ಮತ್ತು ಮಂಜುಳ ಎಂಬಿಬ್ಬರನ್ನು ಪೊಲೀಸರು ಬಂಧಿಸಿ, ಒಂಬತ್ತು ಲಕ್ಷ ರೂ. ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಳ್ಳಾಪುರದ ಹೆಚ್.ಎಂ. ಗೌರಮ್ಮ ಅವರ ಮನೆಗೆ ಬುರ್ಖಾ ಧರಿಸಿದ್ದ ಅಪರಿಚಿತ ಮಹಿಳೆ ವಿವಾಹ ಆಮಂತ್ರಣ ಕೊಡುವ ನೆಪದಲ್ಲಿ ಮನೆಯೊಳಗಡೆ ಬಂದು ಒಳಗಿನಿಂದ ಬಾಗಿಲು ಲಾಕ್ ಮಾಡಿದ್ದು, ಬಳಿಕ ಗೌರಮ್ಮ ಅವರ ಬಾಯನ್ನು ಕೈಗಳಿಂದ ಮುಚ್ಚಿ, ಚಾಕು ತೋರಿಸಿ ಬೆದರಿಸಿ ಮಾಂಗಲ್ಯ ಸರ ಸೇರಿದಂತೆ ಇನ್ನಿತರ ಆಭರಣಗಳನ್ನು ದೋಚಿದ್ದರು.
ಈ ಸಂಬಂಧ ಪೊಲೀಸ್ ಠಾಣೆಗೆ ಗೌರಮ್ಮ ದೂರು ನೀಡಿದ್ದರು.