ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ಸಲ್ಲಿಸಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಕಟಿಯಾರ್ ಅವರಿಗಿಂತ ಮೇಲಿನ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ರೂಪಾ ವಿರುದ್ಧ ದೂರು ನೀಡಿ ಬರೆದ ಪತ್ರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಮುಂದುವರಿದ ಭಾಗ ಎಂಬಂತೆ ಕಟಿಯಾರ್ ಅವರನ್ನು ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದಾಗಿದೆ.
ರೂಪಾ ವಿರುದ್ಧ ದೂರು ನೀಡಿದ ಕಟಿಯಾರ್ ಅವರನ್ನು ಆಂತರಿಕಾ ಭದ್ರತಾ ವಿಭಾಗದಿಂದ ಅಷ್ಟು ಮಹತ್ವಪೂರ್ಣವಲ್ಲದ ವಿಭಾಗಕ್ಕೆ ವರ್ಗಾವಣೆ ಮಾಡಿರುವುದು ಸದ್ಯ ಚರ್ಚಾಸ್ಪದ ವಿಷಯವಾಗಿದೆ. ಜೊತೆಗೆ ಯಾವುದೇ ಸಮಂಜಸ ಕಾರಣವನ್ನು ನೀಡದೆ ಸರ್ಕಾರ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿರುವುದಾಗಿದೆ.