ವಿಟ್ಲ: ನಗರದ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ವ್ಯಕಿಯ ಮೇಲೆ ಪೊಲೀಸರು ತಿಂಡಿ ನೀಡಿ ಪೋಷಿಸುತ್ತಿದ್ದ ನಾಯಿ ದಾಳಿ ನಡೆಸಿದ ಘಟನೆ ನಡೆದಿದೆ.
ನಾಯಿ ಕಡಿತಕ್ಕೆ ಒಳಗಾದವರನ್ನು ಕರೋಪಾಡಿ ಗ್ರಾಮದ ಲಕ್ಷ್ಮಣ ಎಂದು ಗುರುತಿಸಲಾಗಿದೆ. ಯಾವುದೋ ವಿಷಯಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲು ಠಾಣೆಗೆ ಬಂದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಸ್ಟೇಷನ್ ಮುಂಭಾಗದಲ್ಲಿದ್ದ ನಾಯಿ ಅವರ ಮೇಲೆರಗಿ ಮೂರು ಕಡೆಗಳಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಾಳು ತಕ್ಷಣವೇ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಲಕ್ಷ್ಮಣ ಅವರನ್ನು ಕಚ್ಚಿದ ನಾಯಿ ಕಳೆದ ಕೆಲವು ಸಮಯದಿಂದ ಠಾಣೆಯಲ್ಲೇ ಉಳಿದುಕೊಂಡಿದ್ದು, ಪೊಲೀಸರು ಅದಕ್ಕೆ ಆಹಾರ ನೀಡಿ ಸಾಕುತ್ತಿದ್ದರು. ಈ ಹಿಂದೆಯೂ ಠಾಣೆಗೆ ಬಂದವರ ಮೇಲೆ ಈ ನಾಯಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಮೇಲಧಿಕಾಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆದೇಶಿಸಿದ್ದಾರೆ.