ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ಕರೆದೊಯ್ಯುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಗೋವಿಂದರಾಜನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ರಾಘವೇಂದ್ರ ರಾವ್ (38) ಬಂಧಿತ ಆರೋಪಿ.
ಆರೋಪಿ ಸುಮಾರು 100 ಕ್ಕೂ ಅಧಿಕ ಜನರಿಗೆ ವಂಚನೆ ಮಾಡಿದ್ದಾಗಿ ತಿಳಿದು ಬಂದಿದ್ದು, ಸುಮಾರು 70 ಲಕ್ಷ ರೂ. ಗಳಿಗೂ ಅಧಿಕ ವಂಚನೆ ಎಸಗಿದ್ದಾಗಿ ತಿಳಿದು ಬಂದಿದೆ.
ಕುಂಭಮೇಳಕ್ಕೆ ಪಾಂಚಜನ್ಯ ಯಾತ್ರೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿದ್ದ. ವಿಮಾನ ಮತ್ತು ರೈಲುಗಳ ಮೂಲಕ ಅಯೋಧ್ಯೆ, ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ, ಬುದ್ಧಗಯಾಗೆ 35 ಸಾವಿರದಿಂದ 40 ಸಾವಿರ ರೂ. ಗಳಿಗೆ ಪ್ರವಾಸ ಯೋಜನೆ ಕೈಗೊಂಡಿದ್ದ. ಊಟ, ವಸತಿ ಸಹ ಇದರಲ್ಲೇ ಇರುವುದಾಗಿ ಬರುವುದಾಗಿ ಜಾಹೀರಾತು ನೀಡಿದ್ದ. ಇದನ್ನು ನಂಬಿದ ಜನರು ಈತನನ್ನು ಸಂಪರ್ಕಿಸಿ, ಪ್ರವಾಸಕ್ಕೆ ಹಣ ನೀಡಿದ್ದರು.
ಹಣ ನೀಡಿದ ಕೆಲವರಿಗೆ ಟಿಕೆಟ್ ಬುಕ್ ಮಾಡಿ, ಆ ಬಳಿಕ ಕ್ಯಾನ್ಸಲ್ ಮಾಡಿ ಹಣ ಹಿಂದಿರುಗಿಸದೆ ವಂಚನೆ ಮಾಡಿದ್ದಾನೆ. ಇನ್ನು ಕೆಲವರಿಗೆ ಕೆಲವರನ್ನು ಪ್ರಯಾಗ್‌ರಾಜ್‌ಗೆ ಕಳುಹಿಸಿ ಆ ಬಳಿಕ ಹಿಂದಿರುಗುವ ಟಿಕೆಟ್ ನೀಡದೆ ವಂಚನೆ ಮಾಡುತ್ತಿದ್ದ.
ಆರೋಪಿ ಬೆಟ್ಟಿಂಗ್ ಆ್ಯಪ್‌ಗಳಲ್ಲಿಯೂ ವಂಚನೆ ಮಾಡಿ ಗಳಿಸಿದ ಹಣ ಹೂಡಿಕೆ ಮಾಡಿ ಸೋತಿದ್ದ ಎಂಬುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಮರ್ಪಕ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.