ನೆಲಮಂಗಲ: ಮದುವೆಯಾಗಿ ಮಗನಿದ್ದರೂ ಹೆಂಡತಿ ಕೆಲವೇ ದಿನಗಳ ಹಿಂದೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನನ್ನು ಮದುವೆಯಾದ ಘಟನೆ ಜಕ್ಕಸಂದ್ರದ ರಾಘವೇಂದ್ರ ನಗರದಲ್ಲಿ ನಡೆದಿದೆ. ರಾಘವೇಂದ್ರ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ರಮೇಶ್ ಮತ್ತು ನೇತ್ರಾವತಿ ತಮ್ಮ 12 ವರ್ಷದ ಪುತ್ರ ಜೊತೆ ವಾಸಿಸುತ್ತಿದ್ದು, ಪತ್ನಿ ನೇತ್ರಾವತಿ ಸದ್ಯ ಬೇರೊಬ್ಬ ಯುವಕನ ಜೊತೆಗೆ ಮದುವೆಯಾಗಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಈ ಸಂಗತಿ ಪತಿ ರಮೇಶ್‌ಗೆ ಗೊತ್ತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಯಾವುದೇ ಕಾರಣವಿಲ್ಲದಿದ್ದರೂ ರಮೇಶ್ ವಿರುದ್ಧ ನೇತ್ರಾವತಿ ಪೊಲೀಸ್ ದೂರು ನೀಡಿದ್ದಳು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಪತ್ನಿ ಪತ್ನಿ ಒಂದಾಗಿ ಬದುಕುವಂತೆ ತಿಳಿ ಹೇಳಿ ಕಳುಹಿಸಿದ್ದರು. ಇದರಿಂದ ರಮೇಶ್ ಅವರಿಗೆ ನೋವಾಗಿದ್ದರೂ ಅವರು ಹೊಂದಾಣಿಕೆ ಮಾಡಿಕೊಂಡಿದ್ದರು. ನೇತ್ರಾವತಿ ಅನಾಥೆಯಾಗಿದ್ದು ಅವರನ್ನು 13 ವರ್ಷದ ಹಿಂದೆ ರಮೇಶ್ ಮದುವೆಯಾಗಿದ್ದರು. ಇದೀಗ ಪತ್ನಿ ರಮೇಶ್ ಅವರನ್ನೇ ತಬ್ಬಲಿ ಮಾಡಿ ಬೇರೊಬ್ಬನ ಜೊತೆಗೆ ಮದುವೆಯಾಗಿದ್ದಾಳೆ. ಈ ಬಗ್ಗೆ ದೂರು ನೀಡಿರುವ ರಮೇಶ್ ಅವರು ನೇತ್ರಾವತಿ ಬಗ್ಗೆ ಜಮೀನು ಅಡವಿಟ್ಟು ಸಾಲ ಮಾಡಿದ್ದಾಳೆ ಎಂದು ಹೇಳಿದ್ದು, ತನಗೆ ಮಗುವನ್ನೂ ತೋರಿಸುತ್ತಿಲ್ಲ. ಮಗುವಿಗೆ ಏನಾಗಿದೆ ಎಂದು ತಿಳಿಯುತ್ತಿಲ್ಲ. ದಯಮಾಡಿ ನನಗೆ ನನ್ನ ಮಗನನ್ನು ಸಿಗುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.