ಇಂಫಾಲ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಎಂದು ಹೇಳಿಕೊಂಡು ಶಾಸಕರಿಗೆ ಸಚಿವ ಸ್ಥಾನದ ಆಸೆ ಹುಟ್ಟಿಸಿ 4 ಕೋಟಿ ರೂ. ಹಗರಣ ನಡೆಸಿದ ಮೂವರು ಆರೋಪಿಗಳು ಪೊಲೀಸರ ವಾಸವಾಗಿದ್ದಾರೆ.
ಸ್ಪೀಕರ್ ಥೋಕ್‌ಚೋಮ್ ಸತ್ಯಬ್ರತ ಅವರಿಗೂ ವಂತಕರು ಕರೆ ಮಾಡಿ ಮೋಸಗೊಳಿಸಲು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
ವಂಚಕರನ್ನು ದೆಹಲಿಯ ಪ್ರಿಯಾಂಶು ಪಂತ್, ಗೌರವ ನಾಥ್ ಮತ್ತು ಉತ್ತರ ಪ್ರದೇಶದ ಉವೈಶ್ ಅಹ್ಮದ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 318(4), ಸೆಕ್ಷನ್ 319(2) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಮಣಿಪುರದಲ್ಲಿ ಕಳೆದ ತಿಂಗಳು ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಅದಾದ ಬಳಿಕ ಜಯ್ ಶಾ ಅವರ ಹೆಸರಿನಲ್ಲಿ ಹಲವು ಶಾಸಕರಿಗೆ ಕರೆ ಮಾಡಿ 4 ಕೋಟಿ ರೂ.ನೀಡಿದಲ್ಲಿ ಸಚಿವ ಸ್ಥಾನ ಸಿಗುವಂತೆ ಮಾಡುವುದಾಗಿ ತಿಳಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.