ಬೆಂಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ನಕಲಿ ಔಷಧ ಮಾರಾಟ ಜಾಲದ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿದ್ದು, ನಕಲಿ ಔಷಧಗಳನ್ನು ಮಾರುವವರ ವಿರುದ್ಧ ಕಾರ್ಯಾಚರಣೆ ನಡೆಸಿ, ಅವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡುವುದಾಗಿ ತಿಳಿಸಿದ್ದಾರೆ.
ನಕಲಿ ಔಷಧಗಳು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಇದನ್ನು ಪತ್ತೆಮಾಡುವ ಕೆಲಸ ನಾವು ಮಾಡುತ್ತಿದ್ದೇವೆ. ಇಂತಹ ನಕಲಿ ಔಷಧಿ ತಯಾರಿಕಾ ಘಟಕಗಳನ್ನು ಹತ್ತಿಕ್ಕುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ನುಡಿದಿದ್ದಾರೆ.
ಈ ನಿಟ್ಟಿನಲ್ಲಿ ಮೆಡಿಕಲ್ ಶಾಪ್‌ಗಳಲ್ಲಿನ ಔಷಧಗಳನ್ನು ಪರೀಕ್ಷೆ ನಡೆಸುವ ಕೆಲಸ ಮಾಡಿದ್ದೇವೆ. ಔಷಧ ನಿಯಂತ್ರಣ ಇಲಾಖೆ ನಕಲಿ ಔಷಧ ತಯಾರಕರು, ವಿತರಕರ ವಿರುದ್ಧ ಕ್ರಮ ಕೈಗೊಂಡು, ಕೇಸು ದಾಖಲಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.