ಮಂಗಳೂರು ; ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಮುಖಂಡ ಎಂ.ಬಿ ಪುರಾಣಿಕ್ ಅವರು ನಿನ್ನೆ ನಡೆದ ಶ್ರೀಮಂತ ಮುಸ್ಲಿಂ ಉದ್ಯಮಿ ಯನೆಪೋಯಾ ಅಬ್ದುಲ್ ಕುಂಞಿ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಭೋಜನ ಸ್ವೀಕರಿಸಿದ್ದಾರೆ.
ಇದೀಗ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಎಂ.ಬಿ ಪುರಾಣಿಕ್ ಅವರ ಈ ನಡೆಗೆ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತವಾಗಿದೆ. ಉದ್ರೇಕಕಾರಿ ಭಾಷಣ ಮಾಡಿ ಹಿಂದೂ ಕಾರ್ಯಕರ್ತರನ್ನು ಬಲಿಪಶು ಮಾಡಿ ತಾವೂ ಮಾತ್ರ ಶ್ರೀಮಂತ ಮುಸ್ಲಿಮ್ ಧಣಿಗಳ ಸಮೋಸ ತಿಂದಿರುವುದು, ಹಿಂದೂ ಕಾರ್ಯಕರ್ತರಿಗೆ ಮೋಸ ಮಾಡಿದಂತೆ ಎಂದು ಟೀಕೆಗಳು ವ್ಯಕ್ತವಾಗಿದೆ.
ಎಂ.ಬಿ ಪುರಾಣಿಕ್ ಅವರು ವಿಶ್ವ ಹಿಂದೂ ಪರಿಷತ್ ಸಂಘಟನೆಯ ನಾನಾ ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿ, ನಾವೆಲ್ಲ ಹಿಂದು ಎಲ್ಲರೂ ಒಂದು ಎನ್ನುತ್ತಾ ಭಾಷಣ ಮಾಡುತ್ತ, ಒಳಗಿಂದ ಒಳಗೆ ದಕ್ಷಿಣ ಕನ್ನಡ ಜಿಲ್ಲೆಯ ತುಳು ಬ್ರಾಹ್ಮಣ ಸಂಘಟನೆಯನ್ನು ಹೈಜಾಕ್ ಮಾಡಿ, ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಅದನ್ನು ನಿಧಾನವಾಗಿ ಕುಟುಂಬದ ಆಡಳಿತದಲ್ಲಿ ಮುನ್ನಡೆಸಿಕೊಂಡು ಸಕಲ ಸಂಪತ್ತು ಸಂಭ್ರಮಗಳಿಂದ ಮೆರೆಯುತ್ತಿದ್ದ ಕಟ್ಟರ್ ಹಿಂದೂ ನಾಯಕ, ವೈದಿಕ ಸನಾತನಿ ಪುರಾಣಿಕರು ಹಿಂದೂ ಸಂಘಟನೆಗಳಿಂದ ನಿವೃತ್ತಿಯಾದ ಬಳಿಕ ಸೌಹಾರ್ದದ ನಾಯಕರಾಗಿ ಬೆಳೆಯುವ ಮೂಲಕ ಹಿಂದೂ ಸಮಾಜದಲ್ಲಿ ಅಚ್ಚರಿ ಮೂಡಿಸಿದ್ದಾರೆ.
