ಚನ್ನಮ್ಮನ ಕಿತ್ತೂರು: ಅಂಬಡಗಟ್ಟಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ಹೆಣ್ಣು ಶಿಶುವಿನ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಬ್ಬರು ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯನಾಶ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಸಿಮ್ರಾನ್ ಮೌಲಾಸಾಬ್ ಮಾಣಿಕಬಾಯಿ ಮತ್ತು ಆಕೆಯ ಪ್ರೇಮಿ ಮಹಾಬಳೇಶ ರುದ್ರಪ್ಪ ಕಾಮೋಜಿ ಇವರಿಬ್ಬರ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ತಮ್ಮ ಅಕ್ರಮ ಸಂಬಂಧ ಮುಚ್ಚಿಡುವುದಕ್ಕಾಗಿಯೋ ಅಥವಾ ಕೂಸು ಬೆಳವಣಿಗೆಯಾಗದ ಕಾರಣದಿಂದಲೋ, ಪ್ರಸವಪೂರ್ವ ಮರಣದ ಕಾರಣಕ್ಕೋ ಹೆಣ್ಣು ಶಿಶುವಿನ ತಲೆಗೆ ಗಾಯ ಮಾಡಿ ಕೊಂದು ಗೋಣಿಯಲ್ಲಿ ಕಟ್ಟಿ ಅಂಬಡಗಟ್ಚಿ ಗ್ರಾಮದಲ್ಲಿ ಎಸೆದು ಹೋಗಿದ್ದರು. ಈ ಪ್ರಕರಣದಲ್ಲಿ ಸೂಕ್ತ ಪುರಾವೆಗಳು ಸಿಕ್ಕಿವೆ ಎನ್ನಲಾಗಿದೆ.
ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.