ವಿಜಯಪುರ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಪತಿ ಪತ್ನಿಯ ಜಗಳ ಪತಿಯೇ ಪತ್ನಿಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನಲ್ಲಿ ಅಂತ್ಯವಾದ ದುರಂತ ಘಟನೆ ನಡೆದಿದೆ.
ಮೃತರನ್ನು ಮೇಘಾ ಸಿದ್ದಪ್ಪ ಹರನಾಳ ಮತ್ತು ಸಿದ್ದಪ್ಪ ಮಲ್ಲಪ್ಪ ಹರನಾಳ ಎಂದು ಗುರುತಿಸಲಾಗಿದೆ.
ಹೊಲದಲ್ಲಿ ಯಾರೂ ಇಲ್ಲದ ವೇಳೆ ದಂಪತಿ ನಡುವೆ ಜಗಳವಾಗಿದ್ದು, ಈ ಸಂದರ್ಭದಲ್ಲಿ ಸಿದ್ದಪ್ಪ ಪತ್ನಿಯನ್ನು ಕೊಂದು ಜಮೀನಿನ ಪಕ್ಕದ ತೆಗ್ಗಿನಲ್ಲಿ ಶವವನ್ನು ಎಸೆದು ಬಳಿಕ ತಾನು ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.